ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಅಧಿಕಾರ ಪ್ರತ್ಯಾಯೋಜನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಇತರೆ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಇತರೆ ಅಧಿಕಾರಿಗಳಿಗೆ ಸರ್ಕಾರದ ಆದೇಶ ಸಂಖ್ಯೆ ಆಕುಕ 156 ಪಸ್ವೀರ 2013 ದಿನಾಂಕ 27-07-2013ರಲ್ಲಿ ನಿಗಧಿಪಡಿಸಿದಂತೆ ಜಾರಿಯಲ್ಲಿರುತ್ತದೆ. 

 ಈ ಪ್ರತ್ಯಾಯೋಜನೆಯನ್ನು 1977ರ ಕರ್ನಾಟಕ ಸರ್ಕಾರದ (ವ್ಯವಹಾರ ಹಂಚಿಕೆ) ನಿಯಮಗಳ ನಿಯಮ 6 ಉಪ ನಿಯಮ (2) ಮತ್ತು ನಿಯಮ 3ರ ಉಪ ನಿಯಮ (2)ರ ಅನುಸಾರ ಗೊತ್ತುಪಡಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಿಗೆ ಸಲ್ಲಿಸಬೇಕಾದ ಪ್ರಕರಣಗಳು

1. ವ್ಯವಹಾರ ನಿಯಮಾವಳಿಗಳಂತೆ ರಾಜ್ಯಪಾಲರು, ಸಚಿವ ಸಂಪುಟ, ಮುಖ್ಯ ಮಂತ್ರಿ ಮತ್ತು ಸಚಿವರಿಗೆ ಸಲ್ಲಿಸಬೇಕಾದ ಎಲ್ಲಾ ಪ್ರಕರಣಗಳು
2. ಎ ಮತ್ತು ಬಿ ಗುಂಪಿನ ಹುದ್ದೆಗಳ ಪದನಾಮ ಬದಲಾಯಿಸುವುದು.
3. ಅನಧಿಕೃತ ಗೈರು ಹಾಜರಿಯಿಂದಾಗಿ ಸೇವೆಯಿಂದ ತೆಗೆದು ಹಾಕುವ ಪ್ರಸ್ತಾಪಗಳನ್ನು ಹೊರತುಪಡಿಸಿ, 
ಎ ಮತ್ತು ಬಿ ಗುಂಪಿನ ಅಧಿಕಾರಿಗಳಿಗೆ 1957ರ ಕರ್ನಾಟಕ 

ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳಂತೆ ಕಠಿಣ ಶಿಕ್ಷೆಯನ್ನು ವಿಧಿಸುವುದು.

4. ರಾಜ್ಯ ವಿಧಾನ ಮಂಡಲದ ಮುಂದೆ ಬರುವ ಪ್ರಸ್ತಾಪಗಳು.
5. ವಿಧಾನ ಮಂಡಲದ ಸಮಿತಿಗಳ ವರದಿಗಳು
6. ಕಾರ್ಯನೀತಿಯ ಪ್ರಶ್ನೆಯನ್ನು ಒಳಗೊಂಡ ಪ್ರಸ್ತಾಪಗಳು.
7. ಭಾರತ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಸ್ತಾಪಗಳು.
8. ಅಧಿನಿಯಮಗಳು ಮತ್ತು ನಿಯಮಾವಳಿಗಳಿಗೆ ಮತ್ತು ಶಾಸನ ಬದ್ದ ಅಧಿಸೂಚನೆಗಳಿಗೆ ತಿದ್ದುಪಡಿಗಳು.
9. ಎ ಮತ್ತು ಬಿ ಗುಂಪಿನ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಮತ್ತು ಹಿಂತೆಗೆದುಕೊಳ್ಳುವುದು.
10. ಸಮಿತಿಗಳು, ಸಲಹಾ ಸಮಿತಿಗಳು ಇತ್ಯಾದಿಗಳ ರಚನೆ.
11. ಸಾರ್ವಜನಿಕ ಪ್ರಾಮುಖ್ಯವಾದ ವಿಚಾರಗಳು.
12. ಪ್ರಾಮುಖ್ಯವಾದ ವಿಷಯವಾಗಿದ್ದು, ಸಚಿವರ ಆದೇಶಗಳ ಅಗತ್ಯತೆ ಇದೆಯೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಪರಿಗಣಿಸುವ ಇತರೆ ಎಲ್ಲಾ 

ಪ್ರಸ್ತಾಪಗಳು.

 

ಪ್ರಧಾನ ಕಾರ್ಯದರ್ಶಿಯವರು ನಿರ್ಧರಿಸಬಹುದಾದ ಪ್ರಕರಣಗಳು

1. ಕರ್ನಾಟಕ ಆಡಳಿತ ಸೇವೆಯ ಎ ಗುಂಪಿನ ಹಿರಿಯ ಶ್ರೇಣಿ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಮತ್ತು ಪತ್ರಾಂಕಿತ ಹುದ್ದೆಗಳಿಗೆ ಮೊದಲ ನೇಮಕಾತಿಯನ್ನು ಹೊರತುಪಡಿಸಿ ಎ ಮತ್ತು ಬಿ ಗುಂಪಿನ ಅಧಿಕಾರಿಗಳಿಗೆ ನಿಯುಕ್ತಿಗೊಳಿಸುವುದು.  ಪದೋನ್ನತಿ ನಿಯೋಜನೆಗಳು. 

2. ರಾಜಿನಾಮೆ ಅಂಗೀಕಾರ ಮತ್ತು ಸ್ವಯಂ ನಿವೃತ್ತಿಗೆ ಅನುಮತಿ ನೀಡುವುದು.

3. ವಿಚಾರಣೆಯಲ್ಲಿ ಅನಧಿಕೃತ ಗೈರು ಹಾಜರಿ ಆರೋಪಗಳು ಸಾಬೀತಾದ ಪ್ರಸ್ತಾಪಗಳಲ್ಲಿ ಎ ಮತ್ತು ಬಿ ಗುಂಪಿನ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವುದು.
4. ಸಿ ಮತ್ತು ಡಿ ಗುಂಪಿನ ಹುದ್ದೆಗಳಿಗೆ ಪದನಾಮ ಬದಲಾಯಿಸುವುದು.
5. ಪರಿವೀಕ್ಷಣಾ ಅವಧಿಯಲ್ಲಿ ಅನಧಿಕೃತವಾಗಿ ಗೈರು ಹಾಜರಾದ ಎ ಮತ್ತು ಬಿ ಗುಂಪಿನ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸುವುದು. 
6. ಇಲಾಖಾ ಮುಖ್ಯಸ್ಥರುಗಳ ಆದೇಶಗಳ ವಿರುದ್ಧ ಸಿ ಮತ್ತು ಡಿ ಗುಂಪಿನ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸುವುದು.
7. ಇಲಾಖಾ ಮುಖ್ಯಸ್ಥರುಗಳ ದಿನಚರಿಗಳ ಪರಿಶೀಲನೆ.
8. ಎ ಮತ್ತು ಬಿ ಗುಂಪಿನ ಅಧಿಕಾರಿಗಳ ಸ್ತಿರ ಮತ್ತು ಚರಾಸ್ತಿಗಳನ್ನು ಖರೀದಿಸಲು ಮತ್ತು ಮಾರಲು ಅನುಮತಿ ನೀಡುವುದು.
9. ಆರ್ಥಿಕ ಇಲಾಖೆಯಿಂದ ಪ್ರತ್ಯಾಯೋಜಿಸಿದ ಸಾಮಾನ್ಯ ಆರ್ಥಿಕ ಅಧಿಕಾರಗಳು.
10. ಯೋಜನಾ ಮತ್ತು ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ಪೂರಕ ಅನುದಾನ ಪಡೆದು ವೆಚ್ಚವನ್ನು ನಿರ್ವಹಿಸಬೇಕಾದ ಪ್ರಸ್ತಾಪಗಳು.
11. ಲೆಕ್ಕ ಪರಿಶೋಧನಾ ವರದಿಗಳು, ಕಂಡಿಕೆಗಳು ಮತ್ತು ಧನವಿನಿಯೋಗ ಲೆಕ್ಕಗಳ ಮೇಲಿನ ಇಲಾಖಾ ಟಿಪ್ಪಣಿಗಳು.

 

ಜಂಟಿ ಕಾರ್ಯದರ್ಶಿ/ಉಪ ಕಾರ್ಯದರ್ಶಿಗಳು ನಿರ್ಧರಿಸಬಹುದಾದ ಪ್ರಕರಣಗಳು

1. ವಿಚಾರಣಾ ಪ್ರಾಧಿಕಾರದ ಶಿಫಾರಸ್ಸುಗಳಂತೆ ನಿಯಮಗಳನ್ವಯ ಸರ್ಕಾರಿ ಸಿಬ್ಬಂದಿಯ ಜನ್ಮ ದಿನಾಂಕ ಮತ್ತು ಹೆಸರಿನ ಬದಲಾವಣೆ.
2. ವರ್ಗಾವಣೆ, ನಿಯೋಜನೆ ಹೊರತುಪಡಿಸಿ ಸಿ ಮತ್ತು ಡಿ ವರ್ಗದ ವಿಷಯಗಳು.
3. ಕಿರಿಯ ಎ ವರ್ಗದ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿ.
4. ಕೇಂದ್ರ ಸ್ಥಾನವನ್ನು ಬದಲಾಯಿಸಲು ಮತ್ತು ವಿಚಾರಣಾ ಪ್ರಕರಣಗಳಲ್ಲಿ ಲಿಖಿತ ಹೇಳಿಕೆಗಳನ್ನು ಸಲ್ಲಿಸಲು ಸಮಯದ ವಿಸ್ತರಣೆಗೆ ಅನುಮತಿ.
5. ನಿಯೋಜನೆಯನ್ನು ಸಂಬಂಧಿಸಿದ ಅಧಿಕಾರಿ ಅನುಮೋದಿಸಿದ ಆರ್ಥಿಕ ಅಥವಾ ಇತರೆ ಇಲಾಖೆಗಳು ನಿಯೋಜನೆಯ ಷರತ್ತುಗಳನ್ನು ಅನುಮೋದಿಸಿದ ಪ್ರಸ್ತಾಪಗಳಲ್ಲಿ ಮಂಜೂರಾತಿ ನೀಡುವುದು.
6. ಸರ್ಕಾರದ ಕಾರ್ಯ ನೀತಿ ಒಳಗೊಳ್ಳದ ಪ್ರಸ್ತಾಪಗಳಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆರ್ಥಿಕ ಇಲಾಖೆ ಅಥವಾ ಆಂತರಿಕ ಆರ್ಥಿಕ ಸಲಹೆಗಾರರ 

ಅಭಿಪ್ರಾಯವನ್ನು ತಿಳಿಸುವುದು.

7. ಭಾರತ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಗಳಿಗೆ ಹಾಗೂ ಇತರೆ ಇಲಾಖೆಗಳು ಇತ್ಯಾದಿಗಳಿಗೆ ರಹಸ್ಯ ಹೊರತುಪಡಿಸಿ ಸಾಮಾನ್ಯ ಪ್ರಸ್ತಾಪಗಳಲ್ಲಿ ವಾಸ್ತವಿಕ 

ಮಾಹಿತಿಯನ್ನು ಪ್ರತಿಗಳನ್ನು ಒದಗಿಸುವುದು.  ನಡವಳಿಗಳು ಮತ್ತು ಪ್ರತಿಗಳಿಗಾಗಿ ಕೋರುವುದು ಹಾಗೂ ಇಲಾಖಾ ಅಧಿಕಾರಿಗಳಿಗೆ ಪ್ರಸ್ತಾಪಗಳನ್ನು ವರ್ಗಾಯಿಸುವುದು.
8. ರಾಜ್ಯ ಸರ್ಕಾರದ ಕಾರ್ಯನೀತಿಗಳನ್ನು ಹೊರತುಪಡಿಸಿ ಸಾಮಾನ್ಯ ಮಾಹಿತಿಯನ್ನು ಭಾರತ ಸರ್ಕಾರಕ್ಕೆ ತಿಳಿಸುವ ಪತ್ರ ವ್ಯವಹಾರಗಳು.
9. ಎ ಮತ್ತು ಬಿ ಗುಂಪಿನ ಅಧಿಕಾರಿಗಳ ಪರಿವೀಕ್ಷಣಾ ಅವಧಿಯನ್ನು ದೃಢೀಕರಿಸುವುದು ಮತ್ತು ಎ ಗುಂಪಿನ ಅಧಿಕಾರಿಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 53 ಎಫ್ ರಡಿ ಪ್ರಮಾಣ ಪತ್ರ ನೀಡುವುದು.

 

ಅಧೀನ ಕಾರ್ಯದರ್ಶಿಗಳು ನಿರ್ಧರಿಸಬಹುದಾದ ಪ್ರಕರಣಗಳು

1. ನಿರ್ಧಿಷ್ಟವಾದ ಪೂರ್ವ ನಿದರ್ಶನಗಳಿರುವ ಮತ್ತು ಸ್ಥಾಯಿ ಆದೇಶಗಳನ್ನು ಒಳಗೊಂಡ ಪ್ರಸ್ತಾಪಗಳು ಮತ್ತು ಬೇರೆ ಇಲಾಖೆಗಳಿಂದ ಸರ್ಕಾರದ ಅಧೀನ ಕಾರ್ಯದರ್ಶಿಯವರ ಹಂತದಲ್ಲಿ ಸ್ವೀಕರಿಸಿದ ಸಾಮಾನ್ಯ ಅನಧಿಕೃತ ಟಿಪ್ಪಣಿಗಳು ಮತ್ತು ಉಲ್ಲೇಖಗಳು.

2. ಉನ್ನತ ಅಧಿಕಾರಿಗಳು ನೀಡಿದ ಅಂತಿಮ ಆದೇಶಗಳಂತೆ ಸರ್ಕಾರದ ಆದೇಶಗಳು, ಅಧಿಸೂಚನೆಗಳು ಮತ್ತು ಪತ್ರಗಳನ್ನು ಹೊರಡಿಸುವುದು.
3. ಭಾರತ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳಿಗೆ ಅಧಿಕೃತ ಪತ್ರಗಳು, ನೆನಪೋಲೆಗಳು ಮತ್ತು ಮಧ್ಯಂತರ ಉತ್ತರಗಳು ಇತ್ಯಾದಿಗಳು
4. ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಗಳ ಮೇಲೆ ಮತ್ತು ತಡೆಯಾಜ್ಞೆ ಇಲ್ಲದ ಮೇಲ್ಮನವಿಗಳನ್ನು ಕೆಳಗಿನ ಅಂಶಗಳನ್ನು ಹೊರತುಪಡಿಸಿ ಪ್ರಕರಣಗಳಲ್ಲಿ ಅಧಿಕಾರಿಗಳಿಂದ 

ವರದಿಗಳಿಗಾಗಿ ಕೋರುವುದು.
 ಅ) ನಿಯಮಗಳನ್ನು ಪಾಲಿಸಿದ ಮತ್ತು
 ಆ) ನ್ಯಾಯಾಲದಲ್ಲಿ ಪ್ರಶ್ನಿಸಬೇಕಾದ ಪ್ರಕರಣವಲ್ಲದ ಅಥವಾ ಉನ್ನತ ಅಧಿಕಾರಿಗಳು ಈಗಾಗಲೇ ನಿರ್ಧರಿಸಿದ ಪ್ರಕರಣಗಳು.
5. ಅಭಿಪ್ರಾಯ ವ್ಯಕ್ತ ಪಡಿಸಿದ ಪ್ರಸ್ತಾಪಗಳಲ್ಲಿ ಇಲಾಖಾ ಮುಖ್ಯಸ್ಥರಿಗೆ ಮತ್ತು ಇತರೆ ಅಧಿಕಾರಿಗಳಿಗೆ ಹೆಚ್ಚುವರಿಗಾಗಿ ಕೋರುವುದು.
6. ಆಯವ್ಯಯದಲ್ಲಿ ಅನುದಾನ ಒದಗಿಸಿದ್ದಲ್ಲಿ, ವೆಚ್ಚ ಮಾಡಲು ಮಂಜೂರಾತಿ ನೀಡಬಹುದಾದ ಸಾಮಾನ್ಯ ಪ್ರಸ್ತಾಪಗಳನ್ನು ಆಂತರಿಕ ಆರ್ಥಿಕ ಸಲಹೆಗಾರರಿಗೆ 

ಕಳುಹಿಸುವುದು.
7. ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 53 (ಎಫ್) ರಡಿ, ಬಿ.ಸಿ. ಮತ್ತು ಡಿ. ವರ್ಗದ ಸಿಬ್ಬಂದಿಗೆ ಪ್ರಮಾಣ ಪತ್ರ ನೀಡುವುದು.
8. ಕರ್ನಾಟಕ ನಾಗರೀಕ ಸೇವಾ ವಿಷಯಗಳ ನಿಯಮ 198ರಡಿ ರಜಾ ನಗಧೀಕರಣ ಮಂಜೂರಾತಿ.

ಇತ್ತೀಚಿನ ನವೀಕರಣ​ : 16-03-2020 05:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ